ಕನ್ನಡ ಕ್ಯಾಲೆಂಡರ್
ನಿಮ್ಮ ಮೊಬೈಲ್ ಅಥವಾ ಡೆಸ್ಕ್ ಟಾಪ್ ಕಂಪ್ಯೂಟರ್ ನಲ್ಲಿ ವರ್ಷದ ಎಲ್ಲಾ ರಜಾ ದಿನಗಳನ್ನು, ವಿಶೇಷ ದಿನಗಳನ್ನು ಕನ್ನಡದಲ್ಲಿ ನೋಡಲು 'ಗೂಗಲ್'ನ ಈ ಕ್ಯಾಲೆಂಡರ್ ಗಳನ್ನು ನಿಮ್ಮ ಅಕೌಂಟ್ ಗೆ ಸೇರಿಸಿ ಕೊಳ್ಳಿ.
ರಜಾ ದಿನಗಳು: ಈ ಕ್ಯಾಲೆಂಡರ್ ವರ್ಷದ ಎಲ್ಲಾ ಸರಕಾರಿ ರಜಾದಿನಗಳು ಹಾಗೂ ನಿರ್ಬಂಧಿತ ರಜಾ ದಿನಗಳನ್ನು ಒಳಗೊಂಡಿದೆ.
ವಿಶೇಷ ದಿನಗಳು: ಇದು ವರ್ಷದ ಎಲ್ಲಾ ವಿಶೇಷ ದಿನಗಳನ್ನು ಒಳಗೊಡಿದೆ.
ಕನ್ನಡ ಕ್ಯಾಲೆಂಡರನ್ನು ನಿಮ್ಮ ಮೊಬೈಲ್, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್ ನಲ್ಲಿ ಬಳಸಲು ಮೇಲಿನ ಲಿಂಕ್ ನ್ನು ಒತ್ತಿ ಈ ಕೆಳಗಿನ ಹಂತಗಳನ್ನು ಅನುಸರಿಸಿ:
- ಮೇಲೆ ನೀಡಿರುವ 'ವಿಶೇಷ ದಿನಗಳು' ಅಥವಾ 'ರಜಾ ದಿನಗಳು' ಲಿಂಕ್ ನ್ನು (ಮೌಸ್ ನ ಸಹಾಯದಿದಂದ ಅಥವಾ Ctrl+C ಕೀಯನ್ನು ಬಳಸಿ) ಕಾಪಿ ಮಾಡಿಕೊಳ್ಳಿ.
- ಕಂಪ್ಯೂಟರ್(Computer)ನ ಬ್ರೌಸರ್(Browser) ನಲ್ಲಿ https://calendar.google.com/calendar/ ಲಿಂಕ್(link)ನ್ನು ಬ್ರೌಸ್(Browse) ಮಾಡಿ.
- ಎಡಭಾಗದಲ್ಲಿರುವ 'Add Calendar' ನಂತರದ ಆಯ್ಕೆಗಳ ಘುಂದಿಯನ್ನು ಒತ್ತಿ, ನಂತರ ಬರುವ ಆಯ್ಕೆಗಳಲ್ಲಿ 'From URL' ಎಂಬ ಆಯ್ಕೆಯನ್ನು ಆಯ್ದುಕೊಳ್ಳಿ.
- ಈಗ ಬರುವ 'Settings' ಪುಟದಲ್ಲಿ 'From URL' ಬಾಕ್ಸ್ ನಲ್ಲಿ ಮೇಲೆ ನೀಡಿರುವ 'ವಿಶೇಷ ದಿನಗಳು' ಅಥವಾ 'ರಜಾ ದಿನಗಳು' ಲಿಂಕ್ ನ್ನು ಪೇಸ್ಟ್ ಮಾಡಿ.
- ನಂತರ 'Add Calendar' ಗುಂಡಿಯನ್ನು ಒತ್ತಿ.
ಕನ್ನಡ ಕ್ಯಾಲೆಂಡರ್ ಗೆ ಸಂಬಂಧಿಸಿದ ನಿಮ್ಮ ಎಲ್ಲಾ ಸಲಹೆ ಮತ್ತು ಅಭಿಪ್ರಾಯಗಳನ್ನು ಕ್ಯಾಲೆಂಡರ್ ನ ಇ-ಮೇಲ್ ವಿಳಾಸಕ್ಕೆ ಕಳುಹಿಸಿ.